16 Apr 2011

ಕ್ರಾಂತಿಕಾರಿಗಳೆ ಮತ್ತೆ ಹುಟ್ಟಿ ಬನ್ನಿ........?

     ಅಂದೊಂದು ಕಾಲವಿತ್ತು ಬ್ರಿಟೀಷರ ದಬ್ಬಾಳಿಕೆಯ ಅಡಿಯಲ್ಲಿ ನರಳುತ್ತ ಅವರ ಎಂಜಲನ್ನು ನೆಕ್ಕುತ್ತ ಭಾರತೀಯರು ತಮ್ಮ ಸ್ವಾತಂತ್ರ್ಯಕ್ಕಾಗಿ ಹಪಹಪಿಸಿದ್ದರು, ಆದರೆ ಬ್ರಿಟೀಷರ ಸಂಪತ್ತು ದೋಚುವ ನೀತಿ ಹಾಗೂ ಅವರ ದಬ್ಬಾಳಿಕೆೆಗೆ ಕೊನೆಯೆ ಇರಲಿಲ್ಲ, ಇಂತಹ ಸಂಧರ್ಭದಲ್ಲಿ ಹುಟ್ಟಿಕೊಂಡ "ಭಾರತ ಮಾತೆಯ" ನಿಜವಾದ ಪುತ್ರರೆ 'ಕ್ರಾಂತಿಕಾರಿಗಳು'.

     ಬ್ರಿಟೀಷ್ ರಕ್ತ ಪಿಪಾಸಕರನ್ನು ಯುದ್ಧಕ್ಕೆ-ಯುದ್ಧ, ರಕ್ತಕ್ಕೆ-ರಕ್ತ, ಎಂಬ ನುಡಿಯಂತೆ ಬ್ರಿಟೀಷರ ಹಿಂಸಾತ್ಮಕ ಮಾದರಿಯನ್ನು ಕ್ರಾಂತಿಕಾರಿಗಳು ಬ್ರಿಟೀಷರಿಗೇ ತಿರುಗಿಸಿದರು, ಆಂಡರ್ಸನ್, ಕರ್ಜನ್ ವೇಲಿ,  kingsford, Lord hordings, ಸ್ಯಾಂಡರರ್ಸ್,   ಮುಂತಾದ ದುರಹಂಕಾರಿ ಬ್ರಿಟೀಷ್ ಆಡಳಿತಗಾರರನ್ನು ಗುಂಡಿಕ್ಕಿ ಕೊಂದ ಕ್ರಾಂತಿಕಾರಿಗಳು ಕೊನೆಯವರೆಗೂ ಕ್ರಾಂತಿಯಲ್ಲೆ ತಮ್ಮ ಜೀವನವನ್ನು ನಡೆಸಿ, ಕ್ರಾಂತಿಯಲ್ಲೇ ಅಂದಿನ ಬ್ರಿಟೀಷ್ ಸಕರ್ಾರದ ಕಠಿಣ ಶಿಕ್ಷೆಗೆ ಗುರಿಯಾಗಿ ವೀರ ಮರಣವನ್ನು ಹೊಂದಿ ಹುತಾತ್ಮರಾದರು, ಕ್ರಾಂತಿಕಾರಿಗಳಲ್ಲಿ ಹಲವಾರು ಮಂದಿ ತಮ್ಮ ಜೀವನದ ಅರ್ಧವಯಸ್ಸನ್ನು ಅನುಭವಿಸದೆ ಭಾರತ ಮಾತೆಗೆ ತಮ್ಮ ತನು-ಮನ-ಪ್ರಾಣವನ್ನು ಅಪರ್ಿಸಿ ಭಾರತದ ಜನರಲ್ಲಿ ಸ್ವತಂತ್ರ್ಯದ ಕಿಚ್ಚನ್ನು ಬಡಿದೆಬ್ಬಿಸಿದರು,

     ಅಂದಿನ ಬ್ರಿಟೀಷ್ ದುರಾಡಳಿತದ ವಿರುದ್ಧ ಹೋರಾಡಿದ ಸ್ವಾತಂತ್ರ್ಯಕ್ಕಾಗಿ ಹಿಂಸಾತ್ಮಕ ಮಾರ್ಗವನ್ನು ಅನುಸರಿಸಿದ ಪ್ರಮುಖ ಕ್ರಾಂತಿಕಾರಿ ಪುರುಷರುಗಳಲ್ಲಿ ವಿ.ಡಿ. ಸಾವರ್ಕರ್, ಮದನ್ಲಾಲ್ ಧಿಂಗ್ರ, ಖದೀರಾಮ್ ಬೋಸ್, ರಾಸ್ ಬಿಹಾರಿ ಬೋಸ್, ಆಜಾದ್ ಚಂದ್ರಶೇಕರ್, ಭಗತ್ಸಿಂಗ್ ಹಾಗೂ ಸುಭಾಷ್ ಚಂದ್ರ ಬೋಸ್ ಮುಖ್ಯರೆನಿಸುತ್ತಾರೆ, ಈ ಮೇಲಿನ ಕ್ರಾಂತಿಕಾರಿಗಳಲ್ಲಿ 'ನೇತಾಜಿ ಸುಭಾಷ್ ಚಂದ್ರ ಬೋಸರನ್ನು ಹೊರತುಪಡಿಸಿ ಎಲ್ಲಾ ಕ್ರಾಂತಿಕಾರಿಗಳು ಸಂಘಟನೆಯ ಕೊರತೆಯನ್ನು ಅನುಭವಿಸಿದರು, ಇದಕ್ಕೆ ಮುಖ್ಯ ಕಾರಣ ಬ್ರಿಟೀಷರು ಅನುಸರಿಸುತ್ತಿದ್ದ ನೀತಿಯ ವಿರುದ್ಧ ತತಕ್ಷಣದಲ್ಲಿ ಅವರನ್ನು ಎದುರಿಸಲು ಮುಂದಾದಾಗ ಅವರಿಗೆ ಸಾಕಷ್ಟು ಜನ ಬೆಂಬಲವನ್ನು ನೀಡಲು ನಿರಾಕರಿಸಿದ್ದು, ಇದರಿಂದ ಬಹುಪಾಲು ಕ್ರಾಂತಿಕಾರಿಗಳು ಬ್ರಿಟೀಷರಲ್ಲಿ ಭಯವನ್ನು ಹುಟ್ಟಿಸಿದರೆ ಹೊರತು ಪೂರ್ಣಪ್ರಮಾಣದಲ್ಲಿ ಅವರನ್ನು ಮತ್ತು ಅವರ ಪ್ರಬಲತೆಯನ್ನು ಅಲುಗಾಡಿಸಲಾಗಲಿಲ್ಲ, ಆದರೆ ದೇಶದ ಸ್ವಾತಂತ್ರ್ಯ ಕೇವಲ ಕ್ರಾಂತಿಕಾರಿಗಳಿಂದಲೆ ಎಂದು ಮನಗಂಡ ಸುಭಾಷ್ ಚಂದ್ರ ಬೋಸರು ಐ.ಎನ್.ಎ. ಎಂಬ ದೊಡ್ಡ ಸಂಘಟನೆಯನ್ನು ಜಪಾನಿನಲ್ಲಿ ಸಜ್ಜುಗೊಳಿಸಿ ಭಾರತದ ಮೇಲೆ ಜಪಾನ್ ಸೇನೆ ಹಾಗೂ ಐ.ಎನ್.ಎ. ಈ ಎರಡು ಸೈನ್ಯಗಳು ದಂಡೆತ್ತಿ ಬಂದವು, ಆದರೆ 2ನೇ ಮಹಾಯುದ್ಧದಲ್ಲಿ ಮಡಿದ ಜಪಾನ್ ಮಿತ್ರರಾಷ್ಟ್ರಕ್ಕೆ ಶರಣಾದ್ದರಿಂದ ಐ.ಎನ್.ಎ. ಯು ಸಹ ತನ್ನ ಮಿತ್ರ ಶಕ್ತಿಯನ್ನು ಕಳೆದುಕೊಂಡು ಬ್ರಿಟೀಷ್ ಸೇನೆಯಿಂದ ಸೆರೆಹಿಡಿಯಲ್ಪಟ್ಟಿತು, ಇದರಿಂದ ಭಾರತದಲ್ಲಿ ಕ್ರಾಂತಿಕಾರಿಗಳಯುಗ ಸುಭಾಷ್ ಚಂದ್ರ ಬೋಸ್ರೊಂದಿಗೆ ಕೊನೆಗೊಂಡಿತು.

     ಭಾರತಮಾತೆಯನ್ನು ಹೆತ್ತತಾಯಿಯಂತೆ ಕಾಣುತ್ತಿದ್ದ ಕ್ರಾಂತಿಕಾರಿಗಳು, ತಮ್ಮ ತಾಯಿಯ ಮೇಲೆ ನಡೆಯುತ್ತಿದ್ದ ಬ್ರಿಟೀಷರ ದೌರ್ಜನ್ಯವನ್ನು ಕಂಡು ಸುಮ್ಮನಿರಲಿಲ್ಲ, ಅವರಲ್ಲಿ ಕ್ರಾಂತಿಯ ಕಿಚ್ಚು ಹೆಚ್ಚಿತ್ತು, ಸ್ವಾತಂತ್ರ್ಯದ ಹಂಬಲ ಮೊಳಕೆಯೊಡೆದು ಸಸಿಯಾಗಿಬೆಳೆದಿತ್ತು, ಭಾರತ ಮಾತೆಯ ಬಗ್ಗೆ ಕ್ರಾಂತಿಕಾರಿಗಳಲ್ಲಿ ಎಷ್ಟು ಅಭಿಮಾನವಿತ್ತೆಂದರೆ ಮದನ್ ಲಾಲ್ ಧಿಂಗ್ರ ಎಂಬ ಕ್ರಾಂತಿಕಾರಿಯು ಒಮ್ಮೆ ಲಂಡನ್ನಿನಲ್ಲಿ ಇಂಗ್ಲೀಷ್ ವಿದ್ಯಾಥರ್ಿಗಳು ಭಾರತದ ಬಗ್ಗೆ ಹಗುರವಾಗಿ ಮಾತನಾಡಿದಾಗ ಧಿಂಗ್ರ ಅದನ್ನು ಪ್ರತಿಭಟಿಸಿದರು ಅದಕ್ಕೆ ಇಂಗ್ಲೀಷರು ಧಿಂಗ್ರನ ಈ ಸಿಡುಕುತನವನ್ನು ಹಗುರವಾಗಿ ಕಂಡು ಅವನಲ್ಲಿ ಒಂದು ಸವಾಲನ್ನು ಮುಂದಿಟ್ಟರು ನಿನ್ನ ಪೌರುಷ ತೋರಿಸಬೇಕಾದರೆ ನಿನ್ನ ಹೆಬ್ಬೆರಳಿಗೆ ಸೂಜಿಯನ್ನು ಚುಚ್ಚಿ ಅದು ಮತ್ತೊಂದು ಕಡೆಗೆ ಬರುವವರೆಗೂ ತಡೆದುಕೊಂಡರೆ ನಿನ್ನ ಮಾತನ್ನು ಒಪ್ಪಬಹುದೆಂದರು ಈ ಸವಾಲನ್ನು ಸ್ವೀಕರಿಸಿದ ಧಿಂಗ್ರ ಸೂಜಿಯನ್ನು ಒಂದು ಕಡೆಯಿಂದ  ಮತ್ತೊಂದು ಕಡೆಗೆ ಬರುವವರೆಗೂ ಅವುಡುಕಚ್ಚಿ ನಿಂತನು, ಈ ಉದಾಹರಣೆಯ ಮೂಲಕ ಕ್ರಾಂತಿಕಾರಿಗಳಲ್ಲಿ ನಮ್ಮ ದೇಶದ ಬಗ್ಗೆ ಇದ್ದ ದೇಶಪ್ರೇಮವು ನಮ್ಮೆಲ್ಲರ ಮನದಲ್ಲಿ ದೇಶ ಪ್ರೇಮದ ಅವಶ್ಯಕತೆಯನ್ನು ಸಾರಿ ತೋರಿಸುತ್ತದೆ.

     ಭಾರತವು ಅಂದು ಬ್ರಿಟೀಷರ ಕಪಿಮುಷ್ಟಿಯಲ್ಲಿ ಸಿಕ್ಕು ಸ್ವತಂತ್ರ್ಯಕ್ಕಾಗಿ ಹಪಹಪಿಸಿತು, ಆದರೆ ಇಂದು ಇರುವ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯನ್ನು ನಮ್ಮ ಭಾರತದ ಪ್ರಜೆಗಳು ಎದುರಿಸುತ್ತಿದ್ದಾರೆ, ಭ್ರಷ್ಟಾಚಾರ, ಅಸಮಾನತೆ, ಬಡತನ, ಲಿಂಗಭೇಧ, ಮೌಲ್ಯವಿಲ್ಲದ ರಾಜಕಾರಣ, ಸಂಪನ್ಮೂಲದ ಅಸಮಾನ ಹಂಚಿಕೆ, ಜಾತಿ, ಉಗ್ರವಾದ, ಮುಂತಾದ ಸಾಮಾಜಿಕ ಸಮಸ್ಯೆಗಳು ಭಾರತವನ್ನು ಬ್ರಿಟೀಷರು ಸಡೆಸುತ್ತಿದ್ದ ದುರಾಡಳಿತಕ್ಕಿಂತ ಹೀನಾಯ ಸ್ಥಿತಿಗೆ ತಲುಪುವಂತೆ ಮಾಡಿದೆ, ಅಂದು ಸ್ವತಂತ್ರ್ಯಕ್ಕಾಗಿ ಹುಟ್ಟಿಕೊಂಡಿದ್ದ ಮಂದಗಾಮಿ, ತೀವ್ರಗಾಮಿ, ಕ್ರಾಂತಿಕಾರಿ ಪಂಥದವರು, ಬ್ರಿಟೀಷರಿಂದ ಭಾರತವನ್ನು ಸ್ವಾತಂತ್ರ್ಯಗೊಳಿಸಲು ಹೋರಾಡಿದರು ಆದರೆ ಇಂದು ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಸಲುವಾಗಿ ಹಾಗೂ ಜನತೆಯ ಪೂರ್ಣ ಸ್ವತಂತ್ರ್ಯಕ್ಕಾಗಿ ಮಂದಗಾಮಿ, ತೀವ್ರಗಾಮಿ ಹಾಗೂ ಕ್ರಾಂತಿಕಾರಿಗಳಲ್ಲಿ ಮುಖ್ಯವಾಗಿ ಕ್ರಾಂತಿಕಾರಿಗಳ ಅವಶ್ಯಕತೆ ಹೆಚ್ಚಾಗಿದೆ ಇಲ್ಲವಾದರೆ ಭಾರತವು ಇಂದಿನ ಸುಡಾನ್, ಜಿಂಬಾಬ್ವೆ, ಪಾಕಿಸ್ತಾನ್, ಸೊಮಾಲಿಯ ದೇಶಗಳ ಸಾಲಿಗೆ ಸೇರುವುದಂತು ಸತ್ಯ......ಕ್ರಾಂತಿಕಾರಿಗಳೆ ಮತ್ತೆ ಹುಟ್ಟಿ ಬನ್ನಿ................?.

           
                                             

     ಸುರೇಶ್ ಕುಮಾರ್. ಎಂ.ಆರ್.
            ಅಂತಿಮ ಬಿ.ಎ.
  ನ್ಯಾಷನಲ್ ಕಾಲೇಜ್(ಬಸವನಗುಡಿ)